ಮಂಗಳೂರು ಬಿಟ್ಟು ರೈಲು ನಿಧಾನಕ್ಕೆ ಹೊರಡುತ್ತಿದ್ದಂತೆ ಹೊಟ್ಟೆಯೊಳಗೇನೋ ತಳಮಳ. ಮಂಗಳೂರು ಬಿಟ್ಟು ದಿಲ್ಲಿಗೆ ಹೋಗೇಕೆಂಬುದು ತೀರ್ಮಾನವಾಗಿ ಕೆಲ ದಿನಗಳು ಕಳೆದಿತ್ತು. ಮನಸ್ಸು ಮರುಗಿರಲಿಲ್ಲ. ಹೊಸ ಊರು ನೋಡುವ ಸುಖ ಹಳೆ ಊರು ಬಿಡುವ ದುಃಖ ಮರೆಸಿತ್ತು.
ಆದರೆ ರೈಲು ಮಂಗಳೂರು ನಿಲ್ದಾಣದಿಂದ ಚಲಿಸಲಾರಂಭಿಸಿದಂತೆ, ಕಳುಹಿಸಲು ಬಂದಿದ್ದ ಹೆಂಡತಿ ಸಿಂಧು, ಗೆಳೆಯ ಲ್ಯಾನ್ಸಿ ದೂರವಾಗುತ್ತ ಕೈಬೀಸುತ್ತಿದ್ದಂತೆ ಕಣ್ಣು ಕೊಳವಾಯಿತು. ಕೈಬೀಸುತ್ತಿದ್ದವರ ಮತ್ತು ಮಂಗಳೂರಿನ ಚಿತ್ರ ಮಸುಕಾಯಿತು.
ಯಾಕೋ ಇದ್ದಕ್ಕಿದ್ದಂತೆ ನಾನು ಒಂಟಿ ಅನ್ನಿಸಿ ದುಃಖ ಒತ್ತರಿಸಿಬಂತು. ಕಣ್ಣೋಟಕ್ಕೆ ನಿಲುಕುವವರೆಗೂ ಅವರಿಬ್ಬರನ್ನು ನೋಡುತ್ತಿದ್ದೆ. ರೈಲು ಮಂಗಳೂರು ಬಿಟ್ಟು ದೂರ ಓಡುತ್ತಿದ್ದರೂ ಮನಸ್ಸು ಮಾತ್ರ ಹಿಂದಕ್ಕೋಡಬಯಸುತ್ತಿತ್ತು. ಇದ್ದಕ್ಕಿದ್ದಂತೆ ದಿಲ್ಲಿಯೂ ಬೇಡ, ಬಡ್ತಿಯೂ ಬೇಡ, ಮಂಗಳೂರಲ್ಲೇ ಉಳಿದುಬಿಡೋಣ ಅನ್ನಿಸೋಕೆ ಶುರುವಾಯಿತು. ರೈಲು ಹಾಳಾಗಿ ಪ್ರಯಾಣವೇ ರದ್ದಾಗಿಬಿಡಾರದೆ ಅನ್ನಿಸಿತು.
ಬೇಕಾದಷ್ಟು ಪ್ರೀತಿ ಮಾಡೋ ಗೆಳೆಯರು. ಎಲ್ಲರಿಗಿಂತ ಮೊದಲು ಸುದ್ದಿಕೊಡೋ ಮಾಹಿತಿದಾರರು. ಸಾಕು ಸಾಕೆನ್ನುವಷ್ಟು ಪ್ರೀತಿ ಮಾಡೋ ಹೆಂಡತಿ. ಇವನ್ನೆಲ್ಲ ಹಿಂದೆ ಬಿಟ್ಟು ನಾನು ದಿಲ್ಲಿಗೆ ಹೊರಟಿದ್ದೆ. ಜೀವನದಲ್ಲಿ ಮಹಾತ್ವಾಕಾಂಕ್ಷೆಗಳನ್ನು ಇರಿಸಿಕೊಳ್ಳದ, ದೊಡ್ಡ ಹುದ್ದೆಯ ಕನಸೂ ಕಾಣದ, ಇದ್ದುದರಲ್ಲೇ ಇದ್ದಷ್ಟು ದಿನ ನನ್ನವರೊಂದಿಗೆ ಹಾಯಾಗಿದ್ದುಬಿಡುವ ಮನಸ್ಥಿತಿಯ ನಾನು ದಿಲ್ಲಿಗೆ ಹೋಗಲು ಯಾಕೆ ಒಪ್ಪಿಕೊಂಡೆ ಎಂಬುದು ನನಗೀಗಲೂ ಪ್ರಶ್ನೆಯೇ. ಬಹುಶಃ ದಿಲ್ಲಿಯ ಬಗೆಗಿದ್ದ ಸುಂದರ ಕಲ್ಪನೆ ಮತ್ತು ವರದಿಗಳ ಮೂಲಕ ಕೊಂಚ ಹೆಸರು ಮಾಡಬಹುದು, ಒಂದಷ್ಟು ಸುಂದರ ಸ್ಥಳಗಳನ್ನು ನೋಡಬಹುದು ಎಂಬುದೇ ಇದಕ್ಕೆ ಕಾರಣವೇನೊ. ಅಥವಾ ಮಂಗಳೂರು ನಿಧಾನಕ್ಕೆ ಬೋರಾಗಲಾರಂಭಿಸಿತ್ತೊ.
ಆದರೂ ಮಂಗಳೂರು ಬಿಡುವಾಗ ಮುಳು ಮುಳು ಅತ್ತಿದ್ದು ನಿಜ. ಯಾಕೆಂದರೆ ನನಗೆ...
ಒಂಟಿ ಒಂಟಿಯಾಗಿರುವುದು
ಬೋರೋ ಬೋರು...
ದಿಲ್ಲಿಗೆ ಹೋಗುವುದು ಮತ್ತು ಹೆಂಡತಿ ಸ್ವಲ್ಪ ಸಮಯ ಬಿಟ್ಟು ಬರುವುದು ಎಂದು ತೀರ್ಮಾನ ಆದಾಗಿನಿಂದ ಹೆಂಡತಿ ಆಗಾಗ ಅಳುತ್ತಿದ್ದಳು. ಯಾಕೆಂದರೆ ಮದುವೆಯಾಗಿ 2 ವರ್ಷದಲ್ಲಿ ನಾವಿಬ್ಬರೂ ೧ ವಾರಕ್ಕಿಂತ ಹೆಚ್ಚು ಬಿಟ್ಟಿದ್ದಿದ್ದೇ ಇಲ್ಲ. ಅವಳಿಗೆ ಧೈರ್ಯ ಹೇಳಿ, ಹೇಳಿ ದಿಲ್ಲಿಗೆ ಹೊರಡುವ ದಿನ ಬರುವಷ್ಟರಲ್ಲಿ ನಾನೇ ಅಳುವ ಸ್ಥಿತಿ ತಲುಪಿದ್ದೆ. ದಿಲ್ಲಿಗೆ ಹೋದರೆ ಮನೆಗೆ ಬರೋದು ವರ್ಷಕ್ಕೊಂದೇ ಸಲ ಎಂಬುದು ನೆನೆದೇ ಅಪ್ಪ-ಅಮ್ಮ ಬೇಜಾರು ಮಾಡಿಕೊಂಡಿದ್ದಾರೆ. ಫೋನು ಮಾಡಿದರೆ ಮಾತಾಡಲಾಗದಷ್ಟು ದುಃಖ.
ಅವರಿಗೆಲ್ಲ ಸಮಾದಾನ ಮಾಡುತ್ತ ಮಾಡುತ್ತ ನಾನೇ ಸಮಾದಾನ ಮಾಡಿಸಿಕೊಳ್ಳುವ ಸ್ಥಿತಿ ತಲುಪಿದ್ದೆ. ಆದರೆ ನಾನು ಧೈರ್ಯ ಹೇಳುವುದು ಬಿಟ್ಟು ಅತ್ತರೆ ಅವರು ಇನ್ನಷ್ಟು ಅತ್ತಾರು ಎಂಬ ಕಾರಣಕ್ಕೆ ದುಃಖ ಹೊರಗೆಡಹಿರಲಿಲ್ಲ. ಅಲ್ಲದೆ ವರ್ಗಾವಣೆಯಿಂದಾಗಿ ಮಾಡೇಕಾಗಿದ್ದ ಕೆಲಸಗಳೂ ಸಾಕಷ್ಟಿದ್ದವು. ಹೀಗಾಗಿ ದುಃಖಿಸಲು ಸಮಯವೂ ಸಿಕ್ಕಿರಲಿಲ್ಲ.
ರೈಲು ಮಂಗಳೂರು ಬಿಡುತ್ತಿದ್ದಂತೆ ಅಳುವೇ ತುಟಿಗೆ ಬಂದಂತೆ...ಏನು ಮಾಡಿದರೂ ಅಳು ತಡೆಯದಾದೆ. ಸುಮ್ಮನೆ ಕುಳಿತು ಅತ್ತೆ. ರೈಲು ಮಂಗಳೂರು ಬಿಟ್ಟು ೩ ತಾಸು ಕಳೆದರೂ ಕಣ್ಣು ಮಾತ್ರ ಒಣಗಲೇ ಇಲ್ಲ.
ಕಣ್ಣೀರ ಧಾರೆ
ಇದೇಕೆ ಇದೇಕೆ...
ಹಾಗಂತ ಕೇಳಲು ಅಲ್ಲಿ ಯಾರೂ ಇರಲಿಲ್ಲ. ಅಂತೂ ಸಮಾದಾನವಾಗುವ ಹೊತ್ತಿಗೆ ನನ್ನ ಹಿಂದಿನ ಸೀಟಿನಿಂದಲೂ ಮೂಗು ಸೇರಿಸುವ ಸೊರ್ ಸೊರ್ ಶಬ್ದ ಕೇಳತೊಡಗಿತು. ನೀನೊಬ್ಬನೇ ಅಲ್ಲ ಊರು ಬಿಟ್ಟು ಹೊರಟ ಎಲ್ಲರಿಗೂ ಹೀಗೇ ಆಗುತ್ತದೆ ಎಂದು ಸೊರ್ ಸೊರ್ ಶಬ್ದವೇ ಸಮಾದಾನ ಮಾಡಿದಂತಾಗಿ ನಿಧಾನವಾಗಿ ಜೋಗಿ ಕತೆಗಳು ಪುಸ್ತಕ ಕೈಗೆತ್ತಿಕೊಂಡೆ. ಮನಸ್ಸು ಕತೆಗಳಲ್ಲಿ ಮುಳುಗಲಾರಂಭಿಸಿತು. ರೈಲು ದಿಲ್ಲಿಯತ್ತ ನನಗಿಂತ ಅರ್ಜೆಂಟಿನಲ್ಲಿ ಓಡಲಾರಂಭಿಸಿತು.
7 comments:
ವಿನಾಯಕ,
ನಿಮ್ಮ ಈ ಲೇಖನವನ್ನು ಎದುರುನೋಡುತ್ತಿದ್ದೆ. ಹೊಸ ಜಾಗದಲ್ಲಿ ಹೆಸರು ಗಳಿಸಿರಿ. ಶುಭ ಹಾರೈಕೆಗಳು. ಸಮಯ ಸಿಕ್ಕಾಗ ಬ್ಲಾಗಿಂಗೂ ಮಾಡ್ತಾ ಇರಿ.
ಹಾಯ್ ವಿನಾಯಕ್,
ದಿಲ್ಲಿಗೆ ಬಡ್ತಿ, ವರ್ಗ ಆಗಿರೋದು ಕೇಳಿದೆ. ತುಂಬಾ ಹೆಮ್ಮೆ ಅನ್ನಿಸಿತು. ಬಹುಶಃ ಶ್ರಮಕ್ಕೆ ತಕ್ಕ ಪ್ರತಿಫಲ ಅಂದ್ರೆ ಇದೇ ಇರಬಹುದು. ಅದು ಸಿಗೋದಕ್ಕೆ ಕೂಡ ಅದೃಷ್ಟವೂ ಬೇಕು.
ಮತ್ತಷ್ಟು ಹೆಸರು ಮಾಡಿ, ಎತ್ತರೆತ್ತರ ಬೆಳೆಯಿರಿ ಅಂತ ಹಾರೈಸ್ತೀನಿ. ಎಷ್ಟೇ ದೂರ ಹೋದ್ರೂ, ಆನ್ಲೈನಿನಲ್ಲಿ ಹತ್ತಿರವೇ ಇರ್ತೀವಲ್ಲಾ ಅಂತ ಸಂತೋಷ ಪಡಿ!
Good luck...
-Avinash
(avisblog.wordpress.com)
ತುಂಬಾ ಸಂತೋಷ. ಇಂತಹ ಪ್ರೀತಿ, ಪ್ರೋತ್ಸಾಹದ ಮಾತುಗಳು ಎಷ್ಟೋ ಸಮಾದಾನ ನೀಡುತ್ತವೆ. ಬ್ಲಾಗಿಂಗು ಖಂಡಿತ ಮುಂದುವರಿಸ್ತೀನಿ ರಾಜೇಶ್.
ನಮಸ್ಕಾರ್ ಅವಿನಾಶ್ ಅವರೆ, ನೀವು ನನ್ನ ಮೇಲಿಟ್ಟಿರೋ ಪ್ರೀತಿ, ಅಭಿಮಾನಕ್ಕೆ ನಾನು ಸದಾ ರುಣಿ. ಆನ್ ಲೈನ್ ನಲ್ಲಿ ಖಂಡಿತ ಸಿಗ್ತೀನಿ. ನಾನು ನಿಮ್ಗೆ ತಿಳಿಸ್ಬೇಕಿತ್ತು. ಆಗ್ಲಿಲ್ಲ. ಸಾರಿ. ನಿಮ್ಮ ಹಾರೈಕೆ, ಆಶೀರ್ವಾದ ನನ್ನ ಮೇಲೆ ಸದಾ ಇರ್ಲಿ. ನಿಮ್ಮಂಥವರ ಜೊತೆ ಇನ್ನಷ್ಟು ವರ್ಷ ಕೆಲಸ ಮಾಡೋ ಅವಕಾಶ ಸಿಗ್ಬೇಕಿತ್ತು ಆವಾಗಾವಾಗ ಅನ್ನಿಸ್ತಾ ಇರುತ್ತೆ. ಇದು ಮುಖಸ್ತುತಿ ಖಂಡಿತ ಅಲ್ಲ.
ninninda ee reethiya baraha yavagalE nirikshisidde, adre tadavagiyadru bardiddi. anyway hosa jagakke hondikollalu ninge hechchu kaala beda. adru neenu heLida haage mangalorennu miss madodu KASHTA KASHTA :)
Nimige Manglore bittaga hege anisito hange nange uru bittu Delhi ge horatu ninthaga vedane kadade iralilla. Nimge railway station nalli nimma frend hagu wife idru. nanu beglur airport bittaga yaru irlilla. yakandre bengluralli 10 dina iddu nantra delhige horataddu. A samayadalli benglurallu frens kuda irlilla. Aga thane college mugisiddashte. kelsada anubhavavu illa. Adru hegi manasu madi Delhige bande bitte. eega manassu niralavagide. Delhi parichaya agide.
The article represents everyones feeling while leaving the native place.its really difficult to work in a place away from our own land,family etc.
mangalore.abdulkhadar@gmail.com
thumba chennagide bhatre
Post a Comment