‘ದೇವರೆ ಅಗಾಧ ನಿನ್ನ ಕರುಣೆಯ ಕಡಲು
ನನಗೆ ಸಾಧ್ಯವೇ ಅದರ ಆಳ ಅಳೆಯಲು’ ಎಂಬ ಹಾಡಿನಲ್ಲಿ...
‘ತಾಮಸಕ್ಕೆ ಬಲವ ಕೊಟ್ಟೆ, ರಾಜಸಕ್ಕೆ ಫಲವ ಕೊಟ್ಟೆ,
ಸತ್ವಕೆ ಶಂಢತ್ವ ಕೊಟ್ಟೆ, ತತ್ವ ಗೊಣಗಲುಕ
ಯ್ಯ ಕೊಟ್ಟೆ ಕೆಡವೆಂಲೆಂದು, ಕಾಲು ಕೊಟ್ಟೆ ಎಡವಲೆಂದು
ಬುದ್ದಿಕೊಟ್ಟೆ ನಿನ್ನನೇ ಅಲ್ಲಗಳೆಯಲು...’ ಎಂದು ಕವಿ ಬಿ.ಆರ್. ಲಕ್ಷಣ ರಾವ್ ಬರೆದಿದ್ದಾರೆ. ಕರುಣಾನಿಧಿಯಂಥ ಜನರ ಕುರಿತೇ ಬರೆದಂತಿಗೆ ಈ ಸಾಲುಗಳು.
ಹಿಂದೂ ಧರ್ಮದಷ್ಟು ವ್ಯಕ್ತಿ ಸ್ವಾತಂತ್ರ್ಯ ನೀಡಿದ ಧರ್ಮ ಇನ್ನೊಂದಿಲ್ಲ. ನೀನು ದೇವಸ್ಥಾನಕ್ಕೆ ಬಾ-ಬಾರದಿರು, ಪೂಜೆ ಮಾಡಿಸು- ಮಾಡಿಸದಿರು, ಕುಂಕುಮ ಹಚ್ಚು-ಹಚ್ಚದಿರು ಹಿಂದೂ ಧರ್ಮ ಕೇಳುವುದಿಲ್ಲ. ದಿನಕ್ಕಿಷ್ಟೇ ಬಾರಿ, ಹೀಗೇ ದೇವರಿಗೆ ಕೈ ಮುಗಿ ಎಂದೂ ಹಿಂದೂ ಧರ್ಮ ಆರ್ಡರ್ ಮಾಡುವುದಿಲ್ಲ. ಹಾಗೆ ಮಾಡದಿದ್ದರೆ ನೀನು ಧರ್ಮಭ್ರಷ್ಟ ಎಂದು ಹಿಂದೂ ಧರ್ಮ ಹೆದರಿಸುವುದಿಲ್ಲ. ಕಾಶಿಗೆ ಹೋದರೆ ಮಾತ್ರ ಮೋಕ್ಷ ಎಂದು ಹೇಳುವುದಿಲ್ಲ. ಕಾಶಿಗೆ ಹೋಗುವುದು ಅಸಧ್ಯವಾ? ದಕ್ಷಿಣದ ಕಾಶಿಯೆಂದು ಹತ್ತಿರದಲ್ಲಿ ಗೋಕರ್ಣವನ್ನು ಇಟ್ಟಿದೆ ಹಿಂದೂ ಧರ್ಮ. ಹೀಗಾಗಿಯೇ...
‘ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೇ ದೇವಿ ನಮಗಿಂದು
ಪೂಜಿಸುವಾ ಬಾರಾ ಬಾರಾ
ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು,
ಹಾವ್ಗಳಿಗೆ ಹಾಲೆರೆದು ಪೋಷಿಸಾಯ್ತು,
ಬಿಸಲು ಮಳೆ-ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು,
ದಾಸರನು ಪೂಜಿಸಿಯೇ ದಾಸ್ಯವಾಯ್ತು’ ಎಂದು ಹಾಡಿದವರನ್ನೂ ಹಿಂದೂ ಧರ್ಮ ತರಾಟೆಗೆ ತೆಗೆದುಕೊಂಡಿಲ್ಲ. ಧರ್ಮದಿಂದ ಹೊರಹಾಕಿಲ್ಲ.
ನಿಮ್ಮ ಧರ್ಮವನ್ನು, ದೈವ ಭಕ್ತಿಯನ್ನು ನಿನಗಿಷ್ಟ ಬಂದ ರೀತಿಯಲ್ಲಿ, ನಿಮಗೆ ಸಾಧ್ಯವಾದ ರೀತಿಯಲ್ಲಿ ಆಚರಿಸು. ದೇಶವನ್ನೇ ಬೇಕಾದರೂ ದೇವರೆಂದು ಪೂಜಿಸು. ಅದರಿಂದ ನಿನ್ನ ಮನಸ್ಸಿಗೆ ಶಾಂತಿ ದೊರೆತರಾಯಿತು ಎನ್ನುತ್ತದೆ ಹಿಂದೂ ಧರ್ಮ. ಆದರೆ ಒಬ್ಬ ಕ್ರೈಸ್ಥ ಯುವಕ ಒಂದು ಭಾನುವಾರ ಚರ್ಚ್ಗೆ ಹೋಗದಿದ್ದರೆ, ಚರ್ಚಿನವರು ನೇಮಿಸಿದ ವ್ಯಕ್ತಿ ಆತನ ಮನೆಗೆ ಬರುತ್ತಾನೆ. ಚರ್ಚಿಗೆ ತಪ್ಪಿಸದೆ ಬರುವಂತೆ ಸೂಚಿಸುತ್ತಾನೆ. ಮತ್ತೆ ತಪ್ಪಿಸಿದರೆ ದಂಡ ಹಾಕುತ್ತಾನೆ. ಮುಸ್ಲಿಮರ ಧರ್ಮ ಒಂದೇ ಮಾತರಂ ಹಾಡುವುದನ್ನೂ ವಿರೋಧಿಸುತ್ತದೆ! ಸಲ್ಮಾನ್ ಖಾನ್ ಕುಟುಂಬ ಸಮೇತ ಗಣಪತಿ ಪೂಜೆ ಮಾಡಿದ ಎಂಬ ಕಾರಣಕ್ಕೆ ಆತನನ್ನು ಧರ್ಮದಿಂದ ಹೊರಹಾಕುವಂತೆ ಫತ್ವಾ ಹೊರಡಿಸುವ ಅಧಿಕಾರವನ್ನು ಮುಸ್ಲಿಂ ಧರ್ಮ ಕೆಲವರಿಗೆ ನೀಡುತ್ತದೆ. ಹೀಗಿರುವಾಗ ಅವರೆಲ್ಲ ಧರ್ಮದ ವಿರುದ್ಧ ಮಾತಾಡುವುದು ದೂರವೇ ಉಳಿಯಿತು.
ಚರ್ಚ್ಗೆ ಅಥವಾ ಮಸೀದಿಗೆ ಹೋದ ಕಾರಣಕ್ಕೆ ಧರ್ಮದಿಂದ ಹೊರ ಹಾಕಿಸಿಕೊಂಡವರಂತೆ ಅಥವಾ ಹೆದರಿಕೊಂಡವರಂತೆ ದೇವಸ್ಥಾನಕ್ಕೆ ಹೋಗದೆ ಹೆದರಿದ ಒಬ್ಬ ಹಿಂದುವೂ ಸಿಗುವುದಿಲ್ಲ. ಇಂತಹ ಉದಾತ್ತ ಧರ್ಮವನ್ನು ಗೌರವಿಸುವ ಬದಲು ಅದೇ ಧರ್ಮ ನೀಡಿದ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಂಡು ಧರ್ಮವನ್ನು ನಿಂದಿಸುವವರೇ ಹೆಚ್ಚು.
ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ರಾಮನೇ ಇಲ್ಲ, ಆತ ಮಹಾ ಕುಡುಕ ಎಂದು ಹೇಳಿಕೆ ನೀಡಿದಾಗ ನನ್ನಷ್ಟಕ್ಕೆ ಬರೆದಿಟ್ಟಿದ್ದೆ. ಈಗ ಬ್ಲಾಗಿಸುತ್ತಿದ್ದೇನೆ.
ರಾಮ ಕೇವಲ ಐತಿಹಾಸಿಕ ವ್ಯಕ್ತಿಯಲ್ಲ. ಆತ ಕೇವಲ ಕತೆಯ ನಾಯಕನೂ ಅಲ್ಲ. ವಾಲ್ಮೀಕಿ ರಚಿತ ರಾಮಾಯಣದ ಪಾತ್ರ ಮಾತ್ರವಂತೂ ಖಂಡಿತ ಅಲ್ಲ.ರಾಮ ಹಿಂದೂ ಸಮಾಜದ ಅಷ್ಟೇ ಅಲ್ಲ ಒಬ್ಬ ವ್ಯಕ್ತಿ ಹೇಗಿರಬೇಕೆಂಬುದಕ್ಕೆ ಆದರ್ಶ. ಸಮಾಜದ ಸ್ವಾಸ್ಥ್ಯಕ್ಕೊಂದು ಭದ್ರ ಅಡಿಪಾಯ. ಹಾಗಾಗಿ ರಾಮನ ಅಸ್ತಿತ್ವವೆಂದರೆ ಅದು ಹಿಂದೂ ಸಮಾಜದ ಪ್ರತಿಯೊಬ್ಬನ ಅಸ್ತಿತ್ವ.ನೆನಪು ಮಾಡಿಕೊಳ್ಳಿ... ಚಿಕ್ಕಂದಿನಲ್ಲಿ ಆಲಿಸಿದ ರಾಮಾಯಣ, ಕಣ್ಣಲ್ಲಿ ನೀರುಕ್ಕಿಸಿದ ಪುಣ್ಯಕೋಟಿ ಗೋವಿನ ಕತೆ, ಸತ್ಯ ಹರಿಶ್ಚಂದ್ರನ ಕತೆ ಇವೆಲ್ಲ ನಮ್ಮ ಜೀವನದ ಮೇಲೆ, ನಮ್ಮ ವ್ಯಕ್ತಿತ್ವದ ಮೇಲೆ ಅದೆಂತಹ ಪರಿಣಾಮ ಬೀರಿವೆ. ಕೊಟ್ಟ ಮಾತಿಗೆ ತಪ್ಪದಿರುವುದನ್ನು ಪುಣ್ಯಕೋಟಿ ಕತೆಯಿಂದ, ಕಷ್ಟ ಬಂದರೂ ಪರವಾಗಿಲ್ಲ ಸತ್ಯ ಹೇಳಬೇಕಂಬುದನ್ನು ಸತ್ಯ ಹರಿಶ್ಚಂದ್ರನ ಕತೆಯಿಂದ, ಒಬ್ಬ ಆದರ್ಶ ವ್ಯಕ್ತಿ ಹೇಗಿರಬೇಕೆಂಬುದನ್ನು ರಾಮನಿಂದ, ಯಾವುದು ಮಾಡಿದರೆ ತಪ್ಪು ಮತ್ತು ಹಾಗೆ ಮಾಡಿದರೆ ಏನಾಗುತ್ತದೆಂಬುದನ್ನು ರಾವಣನಿಂದ ಕಲಿತವರು ನಾವು.
ಯಾವ ವ್ಯಕ್ತಿಯೂ ಕರುಣಾನಿಧಿಯನ್ನು, ವಾಜಪೇಯಿ, ಮನಮೋಹನ ಸಿಂಗರನ್ನು, ಗಾಂಧಿ ಕುಟುಂಬವನ್ನು ಆದರ್ಶವಾಗಿಸಿಕೊಂಡು ಬೆಳೆದಿಲ್ಲ. ಮಹಾತ್ಮಾಗಾಂಧಿ ಸೇರಿದಂತೆ ಇವರೆಲ್ಲ ಬರುವುದು ರಾಜಕೀಯ ಬುದ್ದಿಯ ಮಂದಿ ರಚಿಸಿದ ಇತಿಹಾಸ ಓದಲು ಆರಂಭಿಸಿದ ನಂತರ. ಆದರೆ ಆರಂಭದಲ್ಲಿ ಅಚ್ಚೊತ್ತುವುದು ಕತೆಗಳಲ್ಲಿನ ಆದರ್ಶಗಳೇ. ಅವುಗಳೇ ನಮ್ಮ ಜೀವನವನ್ನು, ವ್ಯಕ್ತಿತ್ವವನ್ನು ರೂಪಿಸುತ್ತವೆ.
ಇಂದಿಗೂ ಹನುಮನಿಗೆ ಗೌರವ ಸಿಗುವುದು ರಾಮಯಣದಿಂದ. ಮನೆಯ ಸುತ್ತಮುತ್ತ ಓಡಾಡಿಕೊಂಡಿರುವ ಇಣಚಿಯನ್ನು ಒಬ್ಬ ವ್ಯಕ್ತಿಯೂ ಇಂದಿಗೂ ಹೊಡೆದು ಕೊಲ್ಲುವುದಿಲ್ಲ. ಅದೆಷ್ಟು ಲೂಟಿ ಮಾಡಿದರೂ. ರಾಮಾಯಣದಲ್ಲಿ ರಾಮೇಶ್ವರದಿಂದ ಶ್ರೀಲಂಕಾಕ್ಕೆ (ಆಗಿನ ಲಂಕೆಗೆ) ಸೇತುವೆ (ಈಗ ವಿವಾದಕ್ಕೆ ತುತ್ತಾಗಿರುವ ರಾಮಸೇತು) ನಿರ್ಮಾಣ ಮಾಡುವಾಗ ಅಳಿಲು ಚಿಕ್ಕ ಸೇವೆ (ಅಳಿಲು ಸೇವೆ ಎಂಬ ಮಾತು ಇಂದಿಗೂ ಜಾರಿಯಲ್ಲಿದೆ) ಸಲ್ಲಿಸಿತು. ಇದರಿಂದ ಸಂತೋಷಗೊಂಡ ರಾಮ ಅದರ ಬೆನ್ನ ಮೇಲೆ ಕೈಯಿಂದ ತಡವಿದ. ಅದು ಮೂರು ಚಿನ್ನದ ಗೆರೆಗಳಾಗಿ ಮೂಡಿದವು ಎನ್ನುತ್ತದೆ ಕತೆ. ಇಂದಿಗೂ ಇಣಚಿಯ ಬೆನ್ನ ಮೇಲೆ ಮೂರು ಗೆರೆ ಇರುವುದನ್ನು ನಾವು ಕಾಣಬಹುದು. ಅದರಿಂದಾಗಿಯೇ ಯಾರೂ ಇಣಚಿಯನ್ನು ಹೊಡೆದು ಕೊಲ್ಲುವುದಿಲ್ಲ. ಅಷ್ಟರಮಟ್ಟಿಗೆ ರಮಾಯಣ ನಮ್ಮ ಮೇಲೆ, ನಮ್ಮ ವರ್ತನೆಗಳ ಮೇಲೆ ಪರಿಣಾಮ ಬೀರಿದೆ.
ರಾಮಾಯಣ ಹಾಗೂ ನಮ್ಮ ಇತರ ಕತೆಗಳ ಇನ್ನೊಂದು ಮುಖ್ಯ ಅಂಶ ಅಂತಿಮವಾಗಿ ಸತ್ಯಕ್ಕೆ, ಒಳ್ಳೆಯವರಿಗೆ ಜಯವಾಗುತ್ತದೆ ಎಂಬ ಸಂದೇಶ. ಇದು ಅತ್ಯಂತ ಮುಖ್ಯ. ಕಷ್ಟಗಳು ಎಷ್ಟು ಬಂದರೂ ಅಂತಿಮವಾಗಿ ಒಳ್ಳೆಯವರಿಗೆ, ಸತ್ಯವಂತರಿಗೆ ಜಯ ದೊರೆಯುತ್ತದೆ. ಮುದೊಂದು ದಿನ ಸುಖ ಬಂದೇ ಬರುತ್ತದೆ ಎಂಬ ನಂಬಿಕೆಯನ್ನು ಮೂಡಿಸುತ್ತವೆ. ಇದರಿಂದಾಗಿಯೇ ಬಹುತೇಕ ಜನ ಕಷ್ಟಗಳ ನಡುವೆಯೂ ಮುಂದೊಂದು ದಿನದ ಸುಖ ಎದುರು ನೋಡುತ್ತ ಜೀವನ ನಡೆಸುತ್ತಿದ್ದಾರೆ. ನಮ್ಮಲ್ಲಿ ಇಂತಹ ಆಶಾವಾದ ಬೆಳೆಸಿದ್ದು ನಮ್ಮ ಪುರಾಣಗಳ ದೊಡ್ಡ ಸಾಧನೆ.ಮುಂದೊಂದು ದಿನ ಸುಖ ಬರುತ್ತದೆ ಎಂಬ ಕಾರಣಕ್ಕೆ ಇಂದು ಸತ್ಯದ, ಸನ್ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಈಗ ಇದ್ದಕ್ಕಿದ್ದಂತೆ ರಾಮಾಯಣ ಇಲ್ಲ. ರಾಮ ಇದ್ದಿದ್ದೇ ಸುಳ್ಳು. ಪುಣ್ಯಕೋಟಿ ಎಂಬ ಪುಣ್ಯಕೋಟಿ ಗೋವು ಕೇವಲ ಕಟ್ಟು ಕತೆ. ಸತ್ಯ ಹರಿಶ್ಚಂದ್ರ ಇದ್ದಿದ್ದೇ ಸುಳ್ಳು ಎಂದುಬಿಟ್ಟರೆ...
ಹೇಗಾಗಬೇಡ ಅದನ್ನು ನಂಬಿಕೊಂಡವರಿಗೆ. ಅದನ್ನು ನಂಬಿಕೊಂಡೇ ಜೀವನ ನಡೆಸುತ್ತಿರುವ ನಮ್ಮಂಥವರಿಗೆ? ಅವೆಲ್ಲ ಸತ್ಯವೋ ಸುಳ್ಳೋ ಎಂಬ ತರ್ಕಕ್ಕಿಂತ ಒಂದೊಮ್ಮೆ ಇಂತಹ ವಿಷಯಗಳು ನಮಗೆ ಚಿಕ್ಕಂದಿನಲ್ಲಿ ಮನಸಿಗೆ ನಾಟದೇ ಹೋಗಿದ್ದರೆ ನಾವೆಂತಹ ವ್ಯಕ್ತಿಗಳಾಗಿರುತ್ತೆದ್ದೆವು. ಸಮಾಜದಲ್ಲಿ ಅದ್ಯಾವ ಸ್ಥಿತಿ, ಅನೈತಿಕತೆ ನೆಲೆಸಿರುತ್ತಿತ್ತು?ಕರುಣಾನಿಧಿ ನೆಪ ಮಾತ್ರ. ಅಂತಹ ಬೇಕಾದಷ್ಟು ವ್ಯಕ್ತಿಗಳಿದ್ದಾರೆ. ಅವರಿಗೆ ಹಿಂದೂ ಧರ್ಮವನ್ನು ಹಿಯಾಳಿಸುವುದು, ಅದನ್ನು ಸುಳ್ಳೆಂದು ಜರೆಯುವುದು ದೊಡ್ಡ ಹಾಬಿ. ಅದೇ ವ್ಯಕ್ತಿ ಮುಸ್ಲಿಂ ಮತ್ತು ಕ್ರೈಸ್ಥ ಧರ್ಮದ ಬಗ್ಗೆ ಮಾತಾಡಲಾರ. ಅದೇ ವ್ಯಕ್ತಿ ಮುಸ್ಲಿಮರ ಉಪವಾಸ ಅಂತ್ಯಗೊಳ್ಳುವ ದಿನ ಇಫ್ತಾರ್ ಕೂಟದಲ್ಲಿ ಬಿಳಿ ಟೋಪಿ ಹಾಕಿಕೊಂಡು ಬಿರ್ಯಾನಿ ಮೆದ್ದು ಬರುತ್ತಾನೆ ಆದರೆ ಗಣಪತಿ ಹಬ್ಬ ಆಚರಿಸಿದೇ ಜಾತ್ಯಾತೀತತೆ ಮೆರೆಯುತ್ತಾನೆ.
Sunday, October 28, 2007
Subscribe to:
Post Comments (Atom)
3 comments:
ಹಾವಿಗೆಂದು ಹುತ್ತ ಕಟ್ಟಿದ ಇರುವೆ
ತನ್ನ ಬಲಿಗೆ ಬಲೆ ಹೆಣೆದ ಜೇಡ
ಕಸ ಕಡ್ಡಿಯಿಂದ ಗೂಡು ಕಟ್ಟಿದ ಹಕ್ಕಿ,
ಯಾವ ಕಾಲೇಜಿನ ಪ್ರಮಾಣ ಪತ್ರ
ಇವುಗಳೆಲ್ಲ ಇಂಜಿನಿಯರ್ ಎನ್ನಲು?
nice writeup.
super Article
ಒಮ್ಮೊಮ್ಮೆ ಅಂಥವ್ರನ್ನ ಕೊಚ್ಚಿ ಕೊಚ್ಚಿ ಕೊಂದು ಹಾಕಿದ್ರೆ ಏನಾಗುತ್ತದೆ ಅನ್ನೋವಷ್ಟು ಕೋಪ ಬರುತ್ತೆ....
Post a Comment