Thursday, January 03, 2008

ಮಾಂಸಾಹಾರಿ ಆಡು


ಆಡಿನ ಮಾಂಸ ಮನುಷ್ಯ ತಿನ್ನೋದು ಗೊತ್ತು. ಆಡು ಮಾಂಸ ತಿನ್ನೋದೇ?

ನಂಬಲಸಾಧ್ಯ. ಆದರೆ ನಂಬದೆ ಬೇರೆ ದಾರಿಯಿಲ್ಲ. ದೇವಸ್ಥಾನಗಳ ರಾಜ್ಯ ಎಂದೇ ಹೆಸರಾಗಿರುವ ಓರಿಸ್ಸಾದಲ್ಲಿ ಇಂತಹದ್ದೊಂದು ಆಡಿದೆ. ಅದು ಮಾಂಸವನ್ನೂ ತಿನ್ನುತ್ತದೆ ಸಾರಾಯಿ ಕುಡಿದು ಟೈಟೂ ಆಗುತ್ತದೆ. ಈ ವಿಶೇಷತೆಯೇ ಈ ಆಡಿನ ದೀರ್ಘಾಯಸ್ಸಿನ ಮೂಲ!

ಓರಿಸ್ಸಾದ ರಾಜಧಾನಿ ಭುವನೇಶ್ವರದಿಂದ ೩೫೦ ಕಿ.ಮೀ. ದೂರದಲ್ಲಿ ಹೆದ್ದಾರಿ ಬದಿಯಲ್ಲೇ ಇರುವ ಸನಾ ಬಡಾ ದಾಬಾದಲ್ಲಿದೆ ಈ ಆಡು. ಅದರ ಹೆಸರು ಮಂಟು. ಎರಡೂವರೆ ವರ್ಷದ ಈ ಮಂಟುವಿಗೆ ಬೇಯಿಸಿದ ಮಾಂಸ ತಿನ್ನುತ್ತದೆ. ದಾಬಾದಲ್ಲಿ ಆಡು ಕಡಿದು ಬೇಯಿಸಿ ಮಾಡುವ ಮಾಂಸವನ್ನೇ ಈ ಆಡು ತಿನ್ನುತ್ತದೆ. ಇದು ಮಾತು ಕೂಡ ಕೇಳುತ್ತದೆ. ಟೈಟಾದಾಗ ಕೂಡ! ಸತ್ತಂತೆ ಮಲಗಲು, ಹೊಡೆದಾಟದ ಪೋಸು ನೀಡಲು ಹೇಳಿದರೆ ಅರೆ ಕ್ಷಣದಲ್ಲಿ ಮಾಡಿ ತೋರಿಸುತ್ತದೆ ಈ ಆಡು.

ದಾಬಾದ ಮಾಲಿಕ ಸನಾ ನಾಯಕ್ ದಾಬಾದಲ್ಲಿ ಅಡುಗೆಗೆಂದೇ ಆಡು ಸಾಕುತ್ತಾರೆ. ಆದರೆ ಈ ವಿಶೇಷತೆ ಇರುವುದರಿಂದ ಮಂಟುವನ್ನು ಕಡಿದು ಅಡುಗೆ ಮಾಡಿಲ್ಲ. ಈ ಆಡಿನ ಆಕರ್ಷಣೆಗೆ ಜನ ಬರುತ್ತಾರೆ. ಜನ ಆಡಿನೊಂದಿಗೆ ಆಹಾರ ಹಂಚಿಕೊಳ್ಳುತ್ತಾರೆ ಎನ್ನುತ್ತಾನೆ ಮಾಲಿಕ.ಇಷ್ಟೇ ಅಲ್ಲ, ಗ್ರಾಕರ ಆಕರ್ಷಣೆಯ ಕೇಂದ್ರವಾಗಿರುವ ಈ ಆಡಿನ ಮದುವೆಯನ್ನು ಧಾಂ ಧೂಂ ಜೋರಾಗಿ ನಡೆಸಲು ಮಾಲಿಕ ಸಿದ್ಧತೆ ನಡೆಸಿದ್ದಾನೆ. ಸಚಿವರು, ಶಾಸಕರನ್ನೂ ಕರೆಸುವ ಯೋಚನೆ ಮಾಡಿದ್ದಾನೆ. ಅನುರೂಪವಾದ ಹೆಣ್ಣು (ಆಡು) ಸಿಗಬೇಕಷ್ಟೆ!

2 comments:

ಸುಧನ್ವಾ ದೇರಾಜೆ. said...

ನಿಮ್ಮ ಬ್ಲಾಗ್‌ನಲ್ಲಿ ಆಡು ಕೂಡಾ ವಕ್ರವಾಗಿ ಯೋಚಿಸುತ್ತಿದೆಯಲ್ಲ ! ಅದು ಹೇಳಿದ್ದನ್ನೆಲ್ಲಾ ಮಾಡುತ್ತದೆ ಎಂಬುದನ್ನು ಕೇಳಿದರೆ, ಎಲ್ಲೋ ನಾಯಿ ಮಾಂಸ ತಿಂದಿರಬಹುದೆ?!

ವಿನಾಯಕ ಭಟ್ಟ said...

ಸಾಧ್ಯತೆ ಇದೆ.