Wednesday, December 03, 2008

ಪಾಪಿ ಚಿರಾಯು...


ಯಾರೂ ಸಾಯಬಾರದು. ಹಾಗೆಂದು ಬಯಸಬಾರದು. ಹಾಗೆ ಬಯಸುವುದು ಮಾನಸಿಕ ಅದಃಪಥನದ ಸೂಚನೆ. ಇವತ್ತಿನವರೆಗೂ ನನಗೆ ಹಾಗೆ ಅನ್ನಿಸಿದ್ದೂ ಇಲ್ಲ.

ಮೊನ್ನೆ ಹಾಗನ್ನಿಸಿತು. ಉಗ್ರರು ಮುಂಬಯಿಗೆ ದಾಳಿ ನಡೆಸಿದಾಗ!

ದಾಳಿ ನಡೆಸಿದ ಉಗ್ರರೆಲ್ಲ ಸಾಯಬೇಕು ಅಂತ ಎಲ್ಲರಿಗೂ ಅನ್ನಿಸಿದೆ. ನನಗನ್ನಿಸಿದ್ದು ಬೇರೆ. ದಾಳಿಯ ಗಡಿಬಿಡಿಯಲ್ಲಿ ನೀವು ಗಮನಿಸಿದ್ದೀರೋ ಇಲ್ಲವೊ. ನಾನು ಸರಿಯಾಗಿ ಗಮನಿಸಿದೆ.

ತಾಜ್‌ಗೆ ಉಗ್ರರು ದಾಳಿ ನಡೆಸಿದಾಗ ಅದರಲ್ಲಿ ನಮ್ಮ ನಾಲ್ಕು ಸಂಸದರು (ಎಂಪಿಗಳು) ಇದ್ದರು. ಇಬ್ಬರು ಆರಂಭದಲ್ಲೇ ತಪ್ಪಿಸಿಕೊಂಡರೆ, ಇನ್ನಿಬ್ಬರು ೩೨ ಗಂಟೆಗಳ ನಂತರ ಪಾರಾದರು!

ಆಗ ನನಗೆ ಅನ್ನಿಸಿತು. ಇಷ್ಟೆಲ್ಲ ಜನ ಅಮಾಯಕರು, ನಿತ್ಯ ಜೀವನದ ಅನಿವಾರ್ಯಕ್ಕೆ ಹೆಣಗುತ್ತಿರುವವರು ಸತ್ತರು. ನಮ್ಮ ಸೈನಿಕರು, ಪೊಲೀಸರು ಸತ್ತರು. ಛೆ! ಹಾಗಿರುವಾಗ ಇವರೂ ಸಾಯಬಾರದಿತ್ತೇ ಅನ್ನಿಸಿಬಿಟ್ಟಿತು. ವಿಚಿತ್ರವೆಂದರೆ ಇಂದಿಗೂ ನನಗೆ ಹಾಗೆ ಅನ್ನಿಸುತ್ತಲೇ ಇದೆ. ಇನ್ನೂ ಭಯಂಕರವೆಂದರೆ ಛೆ, ನಮ್ಮ ಭದ್ರತಾ ದಳದವರಾದರೂ ಯಾಕೆ ಅವರನ್ನು ಹೊರಗೆ ಸುರಕ್ಷಿತವಾಗಿ ಕರೆತಂದರು. ಅವರನ್ನು ಎಳೆದುಕೊಂಡು ಉಗ್ರರ ಎದುರಿಗೆ ನಿಲ್ಲಿಸಿಬಿಡಬೇಕಿತ್ತು. ಇಲ್ಲವೇ ಭದ್ರತಾ ದಳದ ಸಿಬ್ಬಂದಿಯೇ ಗುಂಡುಹೊಡೆದರೂ ಆಗುತ್ತಿತ್ತು!

ಹೀಗೆಲ್ಲ ಯೋಚಿಸುವುದು ಸ್ವಸ್ಥ ಮನಿಸಿನ ಚಿಂತನೆಯಲ್ಲ ಎಂಬುದು ನನಗೆ ಅರಿವಿದೆ. ಆದರೂ ಅವರ ಮೇಲಿನ ಕೋಪ ಹೀಗೆಲ್ಲ ಯೋಚಿಸುವಂತೆ ಮಾಡುತ್ತಿದೆ. ಮತ್ತು ಅದೇ ಸರಿ ಅಂತಲೂ ಅನ್ನಿಸುತ್ತಿದೆ.

ಹೌದು. ಅವರು ಸಾಯಬೇಕಿತ್ತು. ಆಗಲಾದರೂ ನಮ್ಮ ರಾಜಕಾರಣಿಗಳು ಉಗ್ರರ ದಾಳಿ, ಬಾಂಬ್ ಸ್ಫೋಟಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರೇನೊ. ಇಲ್ಲವಾದಲ್ಲಿ ನಮ್ಮನ್ನಾಳುವವರು ಇದನ್ನೆಲ್ಲ ಮತಕ್ಕಾಗಿ ಬಳಸಿಕೊಳ್ಳುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಅವರದ್ದೇ ಕಾಲಬುಡಕ್ಕೆ ಬಂದಾಗ, ಅವರದ್ದೇ ಜನ ಸತ್ತಾಗಲಾದರೂ ಸ್ವಲ್ಪ ಎಚ್ಚೆತ್ತುಕೊಳ್ಳುತ್ತಾರೇನೋ ಎಂಬ ಕಾರಣಕ್ಕಾಗಿಯೇ ನನಗೆ ಹಾಗನ್ನಿಸಿತು.

ಅವತ್ತು ತಾಜ್‌ನಲ್ಲಿ ಬಿಜೆಪಿಯ ಗೋದ್ರಾ ಸಂಸದ, ಮಹಾರಾಷ್ಟ್ರ ಎನ್‌ಸಿಪಿ ಸಂಸದ, ಕಾಂಗ್ರೆಸ್‌ನ ಸಂದರು ಇದ್ದರು. ಸರ್ವ ಪಕ್ಷ ಸಮನ್ವಯವೂ ಆಗುತ್ತಿತ್ತು. ತಥ್. ಹಾಗಾಗಲಿಲ್ಲ.

ನಾಲ್ಕು ಎಂಪಿಗಳು ಪಾರಾಗಿದ್ದು, ಅದರಲ್ಲೂ ೩೨ ಗಂಟೆಗಳ ನಂತರ ಇಬ್ಬರು ಎಂಪಿಗಳು ಪಾರಾದ ಸುದ್ದಿ ಓದಿದಾಗ ನೆನಪಾಯ್ತು...

ಪಾಪಿ ಚಿರಾಯು!

ಹಾಂ... ಅಂದಹಾಗೆ ಜೋಗಿ ಇತ್ತೀಚೆಗೆ ಬರೆದ ಯಾಮಿನಿ ಕಾದಂಬರಿಯ ಹೀರೋ ಹೆಸರು ಚಿರಾಯು!

ಅದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.

7 comments:

ವಿಜಯ್ ಜೋಶಿ said...

I agree with your writing..

Indian politicians are literally disrobing the Mother India..

They need to be gunned down..

ಮಿಥುನ ಕೊಡೆತ್ತೂರು said...

ಆದರೂ ಯಾರೂ ಸಾಯಬಾರದಿತ್ತು.

ಕೆ. ರಾಘವ ಶರ್ಮ said...

ಮನೆಯಲ್ಲಿ ಟಿವಿ ನೋಡುತ್ತಿದ್ದಾಗ ನಾವೂ ಕೂಡ ಅದನ್ನೆ ಮಾತನಾಡುತ್ತಿದ್ದೆವು. ಆ ಸಂದರ್ಭದಲ್ಲಿ ಟೈಮ್ಸ್ ನೌ ಚಾನೆಲ್ ಜೊತೆ ಎಂಪಿ ಒಬ್ಬರು ದೂರವಾಣಿಯಲ್ಲಿ ಮಾತನಾಡಿ ಗೋಳಿಡುತ್ತಿದ್ದರು...

ತೇಜಸ್ವಿನಿ ಹೆಗಡೆ said...

ನನಗೇನೂ ಹೀಗೆ ಯೋಚಿಸಿವುದು ಸ್ವಸ್ಥಮನಸಿನ ಚಿಂತನೆಯಲ್ಲ ಎಂದೆನಿಸದು. ಭಾರತದ ಬಹುತೇಕ ಪ್ರಜೆಗಳ ಮನಸಿನೊಳಗಿನ ಚಿಂತನೆಯೂ ಇದೇ ಆಗಿರುವುದು. ಆದರೆ ರಾಜಕಾರಣಿಗಳನ್ನು ಬೈಯುವುದರಲ್ಲಿ, ಅವರನ್ನೇ ನಂಬುವುದರಲ್ಲಿ ಏನೂ ಹುರುಳಿಲ್ಲವೆನಿಸುತ್ತಿದೆ. ಅವರನ್ನು ಆರಿಸಿ ಕಳುಹಿಸಿದವರೇ ನಾವು. ಹಾಗಾಗಿ ಬದಲಾವಣೆ ಪ್ರಜೆಗಳಾದ ನಮ್ಮಲ್ಲಿ ಮೊದಲುಂಟಾಗಬೇಕು. ಆಗ ಪ್ರಭುಗಳು ತಾನಾಗೇ ದಾರಿಗೆ ಬರುವರೆನ್ನುವುದು ನನ್ನ ಅಭಿಮತ. ಯಾರೋ ಬಂದು ನಮ್ಮನ್ನುದ್ಧರಿಸುವರೆಂದು ತಿಳಿಯುವುದು ಸರಿಯಲ್ಲ.. ನಾವೇ ನಮ್ಮ ಉದ್ಧಾರಮಾಡಿಕೊಳ್ಳಬೇಕಿದೆ ಈಗ. ಪ್ರತಿಯೊಬ್ಬ ಪ್ರಜೆಯೊಳಗೂ ಯೋಧನೋರ್ವನ್ನು ಬೆಳೆಸಬೇಕಾಗಿದೆ!

ಚಿತ್ರಾ ಸಂತೋಷ್ said...

ತೇಜಕ್ಕನ ಮಾತಿಗೆ ನನ್ನದೂ ಒಂದು ಓಟ್ ...!
-ಚಿತ್ರಾ

ವಿನಾಯಕ ಭಟ್ಟ said...

ಕಾಮೆಂಟಿಸಿದವರಿಗೆ ಥ್ಯಾಂಕ್ಸ್.

ಮಿಥುನ ಕೊಡೆತ್ತೂರು said...

bareyalikke enu dadi?