ಧಾರಾವಾಡದ ಕಾಲೇಜೊಂದರಲ್ಲಿ ಒಂದು ದಿನ ಶಿವರಾಮ ಕಾರಂತರ ಉಪನ್ಯಾಸ ಕಾರ್ಯಕ್ರಮ ಇತ್ತಂತೆ. ಶಿವರಾಮ ಕಾರಂತ ಮಾತನಾಡುತ್ತಿದ್ದಾಗ ಒಬ್ಬಾಕೆ ವಿದ್ಯಾರ್ಥಿನಿ ಕೀಟಲೆ ಮಾಡುತ್ತಲೋ, ಅಕ್ಕಪಕ್ಕದವರಲ್ಲಿ ಮಾತನಾಡುತ್ತಲೋ ಇದ್ದಳಂತೆ. ಕೊನೆಗೆ ಕಾರ್ಯಕ್ರಮ ಮುಗಿದ ಬಳಿಕ ಆಕೆ ಕಾರಂತರಲ್ಲಿ ಅಟೋಗ್ರಾಫ್ ಕೊಡಿ ಪ್ಲೀಸ್ ಎಂದು ಕೇಳಿದಾಗ ಕಾರ್ಯಕ್ರಮದುದಕ್ಕೂ ಆಕೆಯ ಚಟುವಟಿಕೆಯನ್ನು ಗಮನಿಸಿದ್ದ ಕಾರಂತರು ಬರೆದದ್ದು;
'ನನ್ನ ಕೈಬರೆಹದಿಂದ ನಿನ್ನ ಹಣೆ ಬರೆಹವನ್ನು ತಿದ್ದಲಾಗದು!'
ಇಂಥಹದೊಂದು ಬರಹವನ್ನು ಗೆಳೆಯ ಮಿಥುನ್ ಬ್ಲಾಗಿಸಿದ್ದ. ಅದನ್ನು ಓದುತ್ತಿದ್ದಂತೆ ಬಹಳ ದಿನಗಳಿಂದ ಸುಮ್ಮನಿದ್ದ ನನ್ನ ಕೀಟಲೆ ಮನಸ್ಸು ಜಾಗೃತವಾಯಿತು. ಆಗ ಹೀಗೆ ಅನಿಸಿತು.....
* ಹಣೆ ಬರಹದಿಂದಲೂ ಕೆಲವರ ಕೈ ಬರಹ ತಿದ್ದಲು ಸಾದ್ಯವಿಲ್ಲ!
* ಕೈ ಬರಹ ಚೆನ್ನಾಗಿದ್ದವರ ಹಣೆ ಬರಹವೂ ಚೆನ್ನಾಗಿರುತ್ತದೆ ಎನ್ನಲಾಗುವುದಿಲ್ಲ!
* ಹಣೆ ಬರಹ ಬರೆದವನ ಕೈ ಬರಹ ಕೆಟ್ಟದಾಗಿದ್ದರೆ ಹಣೆ ಬರಹವೂ ಕೆಟ್ಟದಾಗಿರುತ್ತದೆ!
* ಅಕ್ಷರಸ್ಥ ಕೂಡ ಹಣೆಬರಹ ಓದಲಾರ!
* ಹಣೆ ಬರಹ ಓದಬಲ್ಲವನೇ ನಿಜವಾದ ಅಕ್ಷರಸ್ಥ!
* ಹಾಗಾದರೆ ಜಗತ್ತಿನ ತುಂಬ ಅನಕ್ಷರಸ್ಥರೆ!
* ಹಣೆಬರಹ ಬರೆಯಲು ದೇವರು ಅದೆಷ್ಟು ಮೊದಲೇ ಪರ್ಮನೆಂಟ್ ಮಾರ್ಕರ್ ಪೆನ್ನು ಕಂಡುಹಿಡಿದಿದ್ದ!
* ಹಣೆಬರಹ ಕೆಟ್ಟದಾಗಿದ್ದರೂ ಕೈ ಬರಹ ಕೆಟ್ಟದಾಗಿರಬೇಕಿಲ್ಲ!
* ಹಣೆಬರಹ ಬರೆಯುವುದೇ ನಿನ್ನ ಹಣೆಬರಹ ಅಂತ ಆತನ ಹಣೆಮೇಲೆ ಬರೆದವರಾರು!
7 comments:
supper
:-) :-) good words .. very good... keep it .. the words are funny but very effective...
thanks for writing..
ನಿಮ್ಮ ಈ ಬರಹ ಓದಬೇಕೆಂಬ ಹಣೆಬರಹ ನಮ್ಮದು! ಚೆನ್ನಾಗಿತ್ತು...
Hii Sir,
Qute lines!!!!
evat belbelagge hanebarahada bagge odabeku anta nan haneli bardittu anta kaanutte :) :)
- Raaghu Kesavinamane
yugAdi habbada shuBAShayagaLu
ವಕ್ರದಂತರ ಹಣೆಬರಹ ದ ಮೇಲಿನ ಈ ಬರಹವೇ ಇಷ್ಟು ಚೆನ್ನಾಗಿದ್ದಾಗ, ಅವರ ಕೈ ಬರಹ ಇನ್ನೆಷ್ಟು ಚೆನ್ನಾಗಿರಬಹುದು ಎಂದು ಎಣಿಸುತ್ತಿದ್ದೇನೆ.
ನಿಮ್ಮ ಅದ್ಭುತ ಕೈಗಳಿಂದ ಸೃಷ್ಟಿಯಾಗುವ ಇನ್ನಷ್ಟು ಬರಹಗಳಿಗೆ ಕಾಯುತ್ತಿದ್ದೇನೆ.
bhatrigr BAHU FIRAQ!
- KRISHNA BHAT
Post a Comment