Monday, February 23, 2009

‘ಸ್ಲಂ ಡಾಗ್’ ಕಾಲದಲ್ಲಿ ‘ಶೌರ್ಯ’ದ ಬೊ(ಹೊ)ಗಳಿಕೆ



ಒಮ್ಮೊಮ್ಮೆ ಹೀಗೇ ಆಗೋದು ನೋಡಿ. ಆ ಡಿವಿಡಿ ತಂದು ಅದೆಷ್ಟೋ ದಿನವಾಗಿತ್ತು. ನನಗೆ ಅತ್ಯಂತ ಪ್ರಿಯವಾದ, ಇಷ್ಟವಾದ ‘ಎ ವೆನ್ಸಡೆ’ ಡಿವಿಡಿಯೊಟ್ಟಿಗೆ ಶೌರ್ಯ ಸಿನಿಮಾದ ಡಿವಿಡಿಯೂ ಇತ್ತು. ಒಮ್ಮೆ ಹಚ್ಚಿ ನೋಡಲು ಕುಳಿತು, ತುರ್ತು ಕೆಲಸದಿಂದ ಬಂದ್ ಮಾಡಿದ್ದೆ. ಶೌರ್ಯ ನೋಡಬೇಕು ಅಂತ ಹಲವು ಬಾರಿ ಅಂದುಕೊಂಡಿದ್ದೆನಾದರೂ, ಕಾಲ ಕೂಡಿ ಬಂದಿರಲಿಲ್ಲ. ಹಿಂದೊಮ್ಮೆ ಗಣೇಶಯ್ಯ ಅವರ ‘ಶಾಲಭಂಜಿಕೆ’ ಪುಸ್ತಕ ಕೂಡ ಹೀಗೇ ಆಗಿತ್ತು. ಆಮೇಲೆ ಓದಿದಾಗ ಛೆ ಮೊದಲೇ ಓದಬಾರದಿತ್ತೆ ಅನ್ನಿಸಿತ್ತು.

ಶೌರ್ಯ ಸಿನಿಮಾ ನೋಡಿದಾಗಲೂ ಹಾಗೇ ಅನ್ನಿಸಬೇಕೆ!

ಇವತ್ತು ಕಚೇರಿಯಿಂದ ಮನೆಗೆ ಬರುವಾಗ ಯಾಕೋ ಶೌರ್ಯ ನೆನಪಾಯಿತು. ಮನೆಗೆ ಬಂದವನೆ ಬೇರೇನೂ ವಿಚಾರ ಮಾಡದೆ ಕಂಪ್ಯೂಟರ್ ಆನ್ ಮಾಡಿ ಕುಳಿತೆ.

ವಾವ್.... ಸೂಪರ್.... ಫೆಂಟಾಸ್ಟಿಕ್....

ಒಮ್ಮೊಮ್ಮೆ ಅಲ್ಲ ಹಲವು ಬಾರಿ ಹೀಗೇ ಆಗುತ್ತೆ ನೋಡಿ. ಎಷ್ಟೋ ಜನ ಈ ಸಿನಿಮಾದ ಹೆಸರನ್ನಾದರೂ ಕೇಳಿದ್ದಾರೊ ಇಲ್ಲವೊ. ಸಾಮಾನ್ಯವಾಗಿ ನಾವು ಬಹುಜನರ ಅಭಿಪ್ರಾಯದಲ್ಲಿ ತೇಲಿಹೋಗುತ್ತೇವೆ. ‘ಸ್ಲಂ ಡಾಗ್’ ಸಿನಿಮಾದಂತೆ!

ನಮ್ಮ ಕಚೇರಿಯಲ್ಲಿರುವ ವಿನಯ್ ಶೇಷಗಿರಿ ‘ಸ್ಲಂ ಡಾಗ್’ ನೋಡಿ ಬಂದು, ಛೆ ಪ್ರಯೋಜನವಿಲ್ಲ. ಒಬ್ಬ ಭಾರತೀಯನಾಗಿ ನಾನು ಅದನ್ನು ಇಷ್ಟಪಡುವುದಿಲ್ಲ ಎಂದರು. ಆ ಸಿನಿಮಾ ನೋಡಬೇಕೆಂದು ಇದ್ದ ಸಣ್ಣ ಉದ್ದೇಶವನ್ನೂ ಕೈಬಿಟ್ಟೆ.

‘ಶೌರ್ಯ’ ಸಿನಿಮಾ ನೋಡಿದಾಗ ಮಾಧ್ಯಮಗಳು ಹೇಗೆ ನಮ್ಮ ಟೇಸ್ಟ್‌ಗಳನ್ನು, ನಿರ್ಣಯಗಳನ್ನು ಬದಲಿಸಿಬಿಡುತ್ತವೆ ಅಂದುಕೊಂಡೆ. ‘ಸ್ಲಂ ಡಾಗ್’ ಬಗ್ಗೆ ನಮ್ಮಲ್ಲಿರುವ ಸ್ಲಂಗಳ ಬಗ್ಗೆ ವರದಿ ಮಾಡಿದ್ದಕ್ಕಿಂತ ಬೇಕಾದಷ್ಟು ಹೆಚ್ಚು ವರದಿ ಮಾಡಿದ ಮಾಧ್ಯಮಗಳು, ನಾವೂ ಆ ಸಿನಿಮಾ ನೋಡಬೇಕು ಅನ್ನಿಸುವಂತೆ ಮಾಡಿಬಿಟ್ಟವು. ನೀವು ಆ ಸಿನಿಮಾ ನೋಡದಿದ್ದರೇ ಬದುಕಿರುವುದೇ ವೇಸ್ಟು ಎಂಬಂತೆ ಬರೆದವು. ಅದೇ ಮಾಧ್ಯಮಗಳು ‘ಶೌರ್ಯ’ದ ಬಗ್ಗೆ ನಿಮಗೆ ಗೊತ್ತೇ ಆಗದಷ್ಟು ಚಿಕ್ಕದಾಗಿ ಬರೆದವು.

ಸಮಸ್ಯೆಯೆಂದರೆ ಬಹುತೇಕ ಬಾರಿ ನಾವು ಸಿನಿಮಾ ರಿವ್ಯೂ ಆಧರಿಸಿ ಸಿನಿಮಾ ನೋಡುತ್ತೇವೆ. ನಾನು ಸಿನಿಮಾ ರಿವ್ಯೂ ಓದುವುದು ಕಡಿಮೆ, ನನಗೆ ನೋಡಬೇಕು ಅನ್ನಿಸಿದರೆ ನೋಡುತ್ತೇನೆ. ಇಲ್ಲವಾದಲ್ಲಿ ಅದೆಷ್ಟೇ ಸೂಪರ್ ಹಿಟ್ ಆಗಿರಲಿ ನಾನು ನೋಡುವುದಿಲ್ಲ.

ಜನರೆಲ್ಲ ನೋಡಿದ ಸಿನಿಮಾ ನಾನು ನೋಡುವುದಿಲ್ಲ. ಬಹುತೇಕ ಸಿನಿಮಾಗಳು ನಾನು ನೋಡಿದ್ದನ್ನು ಹೆಚ್ಚಿನ ಜನ ನೋಡಿರುವುದಿಲ್ಲ.

ಶೌರ್ಯ ಅಂತಹ ಸಿನಿಮಾಗಳಲ್ಲೊಂದು. ಶೌರ್ಯ ನಿಜಕ್ಕೂ ಅದ್ಭುತ ಸಿನಿಮಾ. ಸೈನ್ಯಾಧಾರಿತ ಕತೆ. ನಿಮ್ಮನ್ನು ಆಕರ್ಷಿಸುವ ನಟರಿಲ್ಲ. ದೊಡ್ಡ ದೊಡ್ಡ ಬಾಡಿಗಳ ನಾಯಕರಿಲ್ಲ. ಹೊಕ್ಕಳ ಕೆಳಗೆ ಸೀರೆ ಉಡುವ, 'ಪಿಂಕ್' ಚಡ್ಡಿ ಕಾಣಿಸುವಷ್ಟು ಚಿಕ್ಕ ಸ್ಕರ್ಟ್ ಹಾಕುವ ನಾಯಕಿಯಿಲ್ಲ. ಐಟಂ ಸಾಂಗ್ ಇಲ್ಲ. ಆದರೆ ಒಳ್ಳೆ ಕತೆಯಿದೆ. ನಿಮ್ಮನ್ನು ಆಸಕ್ತಿಯಿಂದ ನೋಡುವಂತೆ ಮಾಡುವ ಸ್ಕ್ರೀನ್ ಪ್ಲೇ ಇದೆ. ಸೈನ್ಯದ ಬಗ್ಗೆ ಒಂದೊಳ್ಳೆ ಮೆಸೇಜ್ ಇದೆ.

ಚಿತ್ರದ ನಾಯಕ ರಾಹುಲ್ ಭೋಸ್ ನ ವಿಚಿತ್ರವಾದ, ಕನ್‌ಫ್ಯೂಸ್ ಆದಂತಿರುವ ಆತನ ಪಿಕ್ಯುಲರ್ ಮ್ಯಾನರಿಸಂ ನಂಗಿಷ್ಟ. ಈತ ಸಿನಿಮಾದಲ್ಲಿ ಒಬ್ಬ ಬೇಜವಾಬ್ದಾರಿ, ಜಾಲಿ ಮನುಷ್ಯ. ಈತನ ಹೆಸರು ಮೇಜರ್ ಸಿದ್ದಾರ್ಥ ಚೌಧರಿ. ಈತನ ಗೆಳೆಯ ಮೇಜರ್ ಆಕಾಶ್ ಚೌಧರಿ. ಒಂದು ದಿನ ಆಕಾಶ್ ಕೇಸೊಂದನ್ನು ತಂದು ಸಿದ್ದಾರ್ಥನಿಗೆ ನೀಡುತ್ತಾನೆ. ಸೈನ್ಯದ ಅಧಿಕಾರಿಯೊಬ್ಬ ತನ್ನ ಕಮಾಂಡಿಂಗ್ ಅಧಿಕಾರಿಯನ್ನೇ ಕೊಂದಿರುತ್ತಾನೆ. ಆತನ ಕೋರ್ಟ್ ಮಾರ್ಷಲ್ ನಡೆಯಬೇಕಿರುತ್ತದೆ. ಅದರಲ್ಲಿ ಆತನ ಪರವಾಗಿ ಸಿದ್ದಾರ್ಥ ವಾದಿಸಬೇಕು. ಇಷ್ಟವಿಲ್ಲದ ಮನಸ್ಸಿನಿಂದ ಒಪ್ಪಿಕೊಂಡ ಸಿದ್ದಾರ್ಥನಿಗೆ ಪತ್ರಕರ್ತೆ (ಚಿತ್ರದ ನಾಯಕಿ) ಭೇಟಿಯಾಗುತ್ತಾಳೆ. ಆಕೆ ಕೇಸಿನ ಬಗ್ಗೆ ಕೇಳಿದಾಗ ಸಿದ್ದಾರ್ಥ ಸರಿಯಾಗಿ ಉತ್ತರಿಸುವುದಿಲ್ಲ. ಆಕೆ ಅದನ್ನೇ ಪ್ರಕಟಿಸಿಬಿಡುತ್ತಾಳೆ. ಹಾಗೆ ಪತ್ರಿಕೆಯಲ್ಲಿ ಬಂದರೆ ಏನಾಗುತ್ತದೆಂದು ನಿಮಗೆ ಗೊತ್ತಿದೆ.

ಈತ ಅವಳಿಗೆ ಬಯ್ಯಲು ಹೋದಾಗ ಆಕೆ ಪ್ರಕರಣದ ಗಂಭೀರತೆಯನ್ನು ಹೇಳುತ್ತಾಳೆ. ಅಂದಿನಿಂದ ಸಿದ್ದಾರ್ಥ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಾನೆ.

ಆಗ ಆತನಿಗೆ ಬ್ರಿಗೇಡಿಯರ್ ಪ್ರತಾಪ್‌ನ ಭೇಟಿಯಾಗುತ್ತದೆ. ಆತ ಪ್ರತಾಪಗಳ ಪರಿಚಯವಾಗುತ್ತದೆ. ಆರೋಪಿ ಜಾವೇದ್ ಖಾನ್ ತನ್ನ ಅಧಿಕಾರಿ ಮೇಜರ್ ರಾಠೋಡ್‌ನನ್ನು ಕೊಂದಿರುತ್ತಾನೆ. ಆದರೆ ಜಾವೇದ್ ಮಾತೇ ಆಡುವುದಿಲ್ಲ. ಬೇಕಂತಲೇ ಮೌನಿಯಾಗಿರುತ್ತಾನೆ. ನಿಧಾನವಾಗಿ ಕತೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಹಂತಹಂತವಾಗಿ, ಕುತೂಹಲಕಾರಿಯಾಗಿ.

ಈ ಚಿತ್ರದಲ್ಲಿ ಕತೆಯ ಜತೆಗೆ ಬ್ರಿಗೇಡಿಯರ್ ಪ್ರತಾಪ್‌ನ ಡೈಲಾಗ್‌ಗಳು, ಮ್ಯಾನರಿಸಂ, ಮೆಡಲ್ ಪಡೆದ ಅಧಿಕಾರಿಯೊಬ್ಬನ ದರ್ಪ, ಆತನ ಸಮರ್ಥನೆಗಳು ನಿಮಗಿಷ್ಟವಾಗುತ್ತವೆ. ಅದೇರೀತಿ ಪೆಕ್ರನಂತೆ ಆಡುವ ಸಿದ್ದಾರ್ಥ ಚೌಧರಿ ನಟನೆ ಕೂಡ. ಹಾಸ್ಯ ಕೂಡ ಅಲ್ಲಲ್ಲಿ ಚಕ್ಕನೆ ಇಣುಕಿ, ಕಚಗುಳಿ ಇಟ್ಟು ಮರೆಯಾಗುತ್ತದೆ.

ಕೇವಲ ಮುಸ್ಲಿಂ ಎಂಬ ಕಾರಣಕ್ಕೆ ಯಾವನೂ ದೇಶದ್ರೋಹಿಯಲ್ಲ ಎಂಬ ಸಂದೇಶದ ಜತೆಗೆ ಭಾರತದ ಸೇನೆ ಜಾತಿ, ಧರ್ಮ ಮೀರಿ ನಿಂತಿದೆ ಎಂಬುದನ್ನೂ ನಿರ್ದೇಶಕ ಸಮರ್ ಖಾನ್ ಬಿಂಬಿಸಿದ್ದಾರೆ. ಮಾಲೇಗಾಂವ್ ಬಾಂಬ್ ಸ್ಫೋಟ ಆರೋಪಿಗಳಿಗೆ ಲೆಫ್ಟಿನೆಂಟ್ ಪುರೋಹಿತ್ ತರಬೇತಿ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲೂ ಈ ಸಿನಿಮಾ ನೋಡಬಹುದು.

ಇಷ್ಟು ಕತೆ ಸಾಕು. ಉಳಿದದ್ದನ್ನು ನೀವು ಸಿನಿಮಾ ನೋಡಿಯೇ ಆನಂದಿಸಿ. ದಯವಿಟ್ಟು ಸಮಯ ಸಿಕ್ಕರೆ ‘ಶೌರ್ಯ’ ಡಿವಿಡಿ ತಂದು ನೋಡಿ. ನಿಮಗಿಷ್ಟವಾಗಬಹುದು. ಕೊಂಚ ದೇಶಭಕ್ತಿಯೂ ಮೂಡಬಹುದು. ನಿಮಗಿಷ್ಟವಾದರೆ ತಿಳಿಸಿ. ಅಷ್ಟೇ ನನಗೆ ತೃಪ್ತಿ.

ಇಷ್ಟಕ್ಕೂ ಈ ‘ಸ್ಲಂ ಡಾಗ್’ ಕಾಲದಲ್ಲಿ ಹಳೆಯ ‘ಶೌರ್ಯ’ದ ಬಗ್ಗೆ ಬೊಗಳಿದ್ದಕ್ಕೆ ಕ್ಷಮೆ ಇರಲಿ.

12 comments:

saangatya said...

namaskara. shouryada bagge odidevu,khushiyaytu, anda haage ninna listnalli saangatyada link haki sir, www.saangatya@gmail.com
dhanyavadagalondige
saangatya

lancyad said...
This comment has been removed by the author.
lancyad said...

ಸ್ಲ0 ಡಾಗ್ ಕನ್ನಡದಲ್ಲಿ ಬರುವ ದಿನಗಳು ದೂರ ಇಲ್ಲ...ಕೊಳೆಗೇರಿ ನಾಯಿ..ಹೇಗಿದೆ ಹೆಸರು... ?

ತೇಜಸ್ವಿನಿ ಹೆಗಡೆ said...

ನಾನೂ ಈ ಚಿತ್ರನೋಡಬೇಕೆಂದಿದ್ದೆ. ಆಗಿರಲಿಲ್ಲ. ಮರೆತೂ ಹೋಗಿತ್ತು.. ನೆನೆಪಿಸಿದ್ದಕ್ಕೆ ಧನ್ಯವಾದ. ಚಿತ್ರದ ಪ್ರೊಮೋ ನೋಡಿ ನನಗೂ ಆಸಕ್ತಿಯುಂಟಾಗಿತ್ತು. ಇನ್ನು ಸ್ಲಂ ಡಾಗ್.. ಇದರ ಕುರಿತಾದ ಲೇಖನ, ಪರ/ವಿರೋಧಿ ವಿಮರ್ಶೆಗಳನ್ನೊ ಓದಿ ಓದಿ ನೊಡಬೇಕೆಂಬ ಅಲ್ಪ ಕುತೂಹಲವೂ ಇಲ್ಲದಂತಾಗಿದೆ!

ಕುಕೂಊ.. said...

ಶೌರ್ಯದ ಬಗ್ಗೆ ಒಳ್ಳೆಯ ಬರಹ.
ನನ್ನ ಮಟ್ಟಿಗೆ ಹೇಳುವುದಾದರೆ "ಸ್ಲಂ ಡಾಗ್" ಒಂದು ಹುನ್ನಾರ. ಕೊಳಕು ಮಾದ್ಯಮಗಳ ಕೀಳುತನ. ಆ ಸಿನಿಮಾದಲ್ಲಿ ಪತ್ರಿಕೆಗಳು ಹೇಳುವಂತ ತಿರುಳು ಏನೂ ಇಲ್ಲ. ಆದರೆ ಕೊನೆಗೆ ತಿಳಿದಿದ್ದು ಏನಪ್ಪ ಅಂದರೆ ಆಸ್ಕರ್ ಅನ್ನುವುದು ಕ್ರಿಶ್ಚಿಯನ್ನರ ದೊಂಬರಾಟವಶ್ಟೆ. ನಾನು ಆ ಸಿನಿಮ ಪೂರ್ತಿಯಾಗಿ ನೋಡಿಲ್ಲ. ನೋಡುವುದಿಲ್ಲ. ನನ್ನ ರೂಮ್ ಮೆಟ್ ಆ ಸಿನಿನಿಮಾ ನೋಡಿ ರೊಚ್ಚಿಗೆದ್ದು ಬೈಯುತ್ತ ಒಂದೆರೆಡು ಸೀನ್ ನೋಡಲು ಒತ್ತಾಯಿಸಿದ. ನೋಡಿದೆ. ಅವನ ಸಿಟ್ಟಿಗೆ ಕಾರಣವೇನೆಂದು ತಿಳಿಯಿತು. ಒಂದೆರಡು ಸೀನ್ ನಲ್ಲೇ ನನಗೆ ಆ ಸಿನಿಮಾದ ಹುನ್ನಾರ ತಿಳಿಯಿತು.
ನನ್ನ ಕೇಳುವುದಾದರೆ ಭಾರತೀಯನಾದವನು ಸ್ಲಂ ಡಾಗ್ ನೋಡದಿರುವುದು ಒಳ್ಳೆಯದು.

ಹರೀಶ ಮಾಂಬಾಡಿ said...

shauradanteinnoo aneka chitragalive...ondonde parichayisidare olledu

Anonymous said...

namste, shourya chitrada bagge mahiti nididdu olledaytu, nodtene, intha chitragala bagge udasina manobhava iruvudarinda avu gurutislpaduvudilla, mahitigee dhanyavadagalu !

Anonymous said...

ನಮಸ್ತೆ.. ನಾಡಿದ್ದು 8-03-2009 ರಂದು ನಡೆಯುವ ಅಮ್ಮನ ಹಬ್ಬಕ್ಕೆ ನಿಮ್ಮನ್ನು ಆಮಂತ್ರಿಸಲು ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ. ನೀವು ಬಂದರೆ ತುಂಬಾ ಸಂತೋಷ ಆಗುತ್ತೆ.

ಶುಭವಾಗಲಿ,
- ಶಮ, ನಂದಿಬೆಟ್ಟ

ಬೆಂಗಳೂರು ರಘು said...

Shourya is an amazing movie..poor fellow did not run in the theaters for long....slumdog is even more amazing,awkward - when i watched slumdog, the only feeling i got was frustration and an urge to make sure that We should not give chance to one other director to point fingers at India... Well I am asking for too much I guess...Sad state to be in

Unknown said...

Hello Sir ,
Your vijayakarnataka articles are super !!!! now u r articles are not comming as frequently as before it was comming .. really i am missing u r articles.... too good ... to punching...... After seeing other reporter's blogs ... i searched u r blog also .. now i got u r blog link ... really i am very happy to read u r blog .. please don't stop u r articles in blogs.. if heavy work is there also ..please continue like this... :-) :-)

ವಿನಾಯಕ ಭಟ್ಟ said...

ಅಯ್ಯೊ, ಅಯ್ಯೊ ಇದೇನು? ಶೌರ್ಯಕ್ಕೆ ನನ್ನ ನಿರೀಕ್ಷೆಗೂ ಮೀರಿ ಟಿಆರ್ ಪಿ ಸಿಕ್ಕಿಬಿಟ್ಟಿದೆ.
ನಿಜವಾಗಿಯೂ ನಾನು ನಿಮಗೆ ಋಣಿ. ನನ್ನ-ನಿಮ್ಮ ಆಸಕ್ತಿಗಳು ಒಂದೇ ಆಗಿರುವುದಕ್ಕೆ ಆಶ್ಚರ್ಯ ಮತ್ತು ಸಂತೋಷ ೆರಡೂ ಆಗಿದೆ.
ರೂಪ ಅವರಂತೂ ನನಗೇ ಇರಿಸುಮುರಿಸಾಗುವಷ್ಟು ಹೊಗಳಿದ್ದಾರೆ. ಹೊಗಳೀಕೆ ಮತ್ತು ತೆಗಳಿಕೆ ಎರಡಕ್ಕೂ ನನ್ನ ಪ್ರತಿಕ್ರಿಯೆ ಥ್ಯಾಂಕ್ಸ್. ರೂಪ ಅವರೆ ಖಂಡಿತ ಬ್ಲಾಗು ನಿಲ್ಲಿಸುವುದಿಲ್ಲ. ಆದರೂ ಮೊದಲಿನಂತೆ ನಿಯಮಿತವಾಗಿ ಬರೆಯಲಾಗುತ್ತಿಲ್ಲ. ಆದರೂ ತಿಂಗಳಿಗೊಂದೆರಡು ಬರಹ ಖಂಡಿತ ಬ್ಲಾಗಿಸಬಹುದು.
ನಿಮ್ಮ ಅಭಿಮಾನಕ್ಕೆ ನಾನು ಋಣಿ.

Unknown said...

Sir ,
Thanks for replying... By the posts also i came to know that u r very bussy .. But still u r writing know that is fine... because i don't want to miss u r posts.:-) :-)