ನಾನಿನ್ನೂ ಜೋಗಿಯವರ ನದಿಯ ನೆನಪಿನ ಹ(ಗು)ಂಗಿನಿಂದ ಹೊರಬಂದಿಲ್ಲ. ಆಗಲೇ ನನ್ನ ಹೆಂಡತಿ ನದಿಯ ಗುಂಗಿಗೆ ಸಿಲುಕಿದ್ದಾಳೆ. ಸಾಮಾನ್ಯವಾಗಿ ಆಕೆ ಓದುವುದು ತುಸು ನಿಧಾನ. ದಿನವೂ ಅಷ್ಟಷ್ಟೇ ಪುಟಗಳನ್ನು ಓದುತ್ತ ಹೋಗುವುದು ಆಕೆ ಅಭ್ಯಾಸ. ಆದರೆ ಜೋಗಿಯವರ ನದಿಯ ನೆನಪಿನ ಹಂಗು ಪುಸ್ತಕ ಹಿಡಿದ ಆಕೆ ಅದನ್ನು ಕೆಳಗೇ ಇಡುತ್ತಿಲ್ಲ.
ಫೆ.೧೧ರಂದು ಓದಲು ಆರಂಭಿಸಿದವಳು ಫೆ.೧೨ಕ್ಕೆ ಮುಗಿಸುವ ಹಂತಕ್ಕೆ ಬಂದಿದ್ದಾಳೆ! ದಾರವಾಹಿಯನ್ನೂ ನೋಡದೆ, ಇಂಟರ್‌ನೆಟ್ ಆನ್ ಮಾಡದೆ ಪುಸ್ತಕಕ್ಕೆ ಅಂಟಿ ಕೂತಿದ್ದಾಳೆ.
ಇವತ್ತೇ ಮುಗಿಸಿಬಿಡುವಷ್ಟು ಇಂಟರೆಸ್ಟಿಂಗ್ ಆಗಿದ್ಯೇನೆ ಅಂದೆ? ಅದಕ್ಕೆ ಹೌದು ಅಂದಳು. ಆದರೆ ಅವಳಿಗೆ ಇಂದೇ ಓದಿ ಮುಗಿಸುವದೂ ಇಷ್ಟವಿಲ್ಲ ಯಾಕೆಂದರೆ ಮುಗಿದೇ ಹೋಗುತ್ತಲ್ಲ ಎಂಬ ಬೇಜಾರು!
ನೋಡಿ ಜೋಗಿ ಯಾರ್‍ಯಾರನ್ನೋ ಎಂಥೆಂಥ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ!
ಮುಕ್ತ
1 month ago
No comments:
Post a Comment